If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: 6 ನೇ ತರಗತಿ > Unit 5

Lesson 2: ಬೀಜೋಕ್ತಿಗಳ ಮೌಲ್ಯೀಕರಿಸುವುದು ಮತ್ತುಆದೇಶಿಸುವುದು .

ಒಂದು ಚರಾಕ್ಷರಗಳನ್ನೊಳಗೊಂಡ ಬೀಜೋಕ್ತಿಗಳ ಬೆಲೆ ಕಂಡು ಹಿಡಿಯುವುದು

ವಿವರಣೆಗಳು, ಉದಾಹರಣೆಗಳು ಮತ್ತು ಅಭ್ಯಾಸದ ಸಮಸ್ಯೆಗಳನ್ನು ಮೌಲ್ಯೀಕರಿಸುವಾಗ ಏಕಚರಾಕ್ಷಗಳನ್ನೊಂಡ ಬೀಜೋಕ್ತಿಗಳು ಯಾವುದೇ ಸಮಯದಲ್ಲಿ ಬರುವುದಿಲ್ಲ.

ಒಂದು ಚರಾಕ್ಷರವುಳ್ಳ ಬೀಜೋಕ್ತಿಯಲ್ಲಿ ಬೆಲೆಯನ್ನು ಹೇಗೆ ಕಂಡುಹಿಡಿಯುವುದು

ಬೀಜೋಕ್ತಿ a+4 ರ ಬೆಲೆಯನ್ನು ಕಂಡುಹಿಡಿಯ ಬೇಕಾಗಿದೆ. ಮೊದಲು ನಾವು ಚರಾಕ್ಷರ a ನ ಬೆಲೆಯನ್ನು ತಿಳಿಯಬೇಕಾಗಿದೆ. ಉದಾಹರಣೆಗೆ, ಬೀಜೋಕ್ತಿಗೆ a=1 ಆದಾಗ ಬೀಜೋಕ್ತಿ ಬೆಲೆ ಕಂಡುಹಿಡಿಯಲು, ನಾವು a ಅನ್ನು 1 ರಿಂದ ಬದಲಾಯಿಸಿ:
a+4=1+4        a ಅನ್ನು 1 ರಿಂದ ಬದಲಾಯಿಸಿ.=5
ಆದುದರಿಂದ, a=1 ಆದಾಗ ಬೀಜೋಕ್ತಿ a+4 ಯು 5 ಕ್ಕೆ ಸಮ.
ನಾವು ಸುಲಭವಾಗಿ a+4 ರ ಬೆಲೆಯನ್ನು a=5 ಆದಾಗ ಕಂಡುಹಿಡಿಯಬಹುದು:
a+4=5+4        ಬದಲಾಯಿಸಿ a ಅನ್ನು 5 ರಿಂದ.=9
ಆದುದರಿಂದ, a=5 ಆದಾಗ ಬೀಜೋಕ್ತಿ a+4 ಯು 9 ಕ್ಕೆ ಸಮ.

ಗುಣಾಕಾರದಿಂದ ಬೀಜೋಕ್ತಿಯ ಬೆಲೆಯನ್ನು ಕಂಡುಹಿಡಿಯುವುದು

ನಿಮಗೆ ಈ ರೀತಿ ಕೇಳಬಹುದು "x=5 ಆದಾಗ 3x ನ ಬೆಲೆಯನ್ನು ಕಂಡುಹಿಡಿಯಿರಿ."
ಗಮನಿಸಿ ಹೇಗೆ ಬೀಜೋಕ್ತಿ 3x ನಲ್ಲಿ ಸಂಖ್ಯೆ 3 ಚರಾಕ್ಷರ x ನ ಬಲಭಾಗದಲ್ಲಿ ಇದೆ. ಇದರ ಅರ್ಥ "x ವು 3 ರಷ್ಟಿದೆ". ನಾವು ಈ ರೀತಿ ಏಕೆ ಮಾಡುತ್ತೇವೆಂದರೆ ಗುಣಾಕಾರದಲ್ಲಿ ಹಳೆಯ ಚಿಹ್ನೆ × ವು ಸುಮಾರು ಚರಾಕ್ಷರ x ನ ರೀತಿಯಲ್ಲೇ ಇದ್ದು ಸ್ವಲ್ಪ ಗೊಂದಲಮಯವಾಗಿದೆ.
ಸರಿ, ಇದೀಗ ನಾವು ಸಮಸ್ಯೆಗೆ ಪರಿಹಾರ ಕಂಡುಹಿಡಿಯೋಣ:
3x=35        ಬದಲಾಯಿಸಿ x ಅನ್ನು 5 ರಿಂದ.=15
ಆದುದರಿಂದ, x=5 ಆದಾಗ ಬೀಜೋಕ್ತಿ 3x ಯು 15 ಕ್ಕೆ ಸಮ.

ಗುಣಾಕಾರವನ್ನು ತೋರಿಸುವ ಹೊಸ ವಿಧಾನಗಳು

ಒಂದು ಕ್ಷಣ ನಿಲ್ಲಿ! ನೀವು ಗಮನಿಸಿದೀರ "3 ರಷ್ಟು 5" ಅನ್ನು 35, 3×5 ರ ಬದಲು ಬರೆದ್ದಿದ್ದೇವೆ? ಒಂದು ಬಿಂದುವನ್ನು ಚಿಹ್ನೆ × ರ ಬದಲು ಬರೆಯುವುದು ಗುಣಾಕಾರವನ್ನು ತೋರಿಸುವ ಹೊಸ ವಿಧಾನ:
35=15
ಗುಣಾಕಾರವನ್ನು ತೋರಿಸಲು ಆವರಣಗಳನ್ನು ಸಹ ಬಳಸಬಹುದು:
3(5)=15
ನಾವು ಕಲಿತ ಗುಣಾಕಾರವನ್ನು ತೋರಿಸುವ ಹೊಸ ವಿಧಾನಗಳನ್ನು ಸಾರಾಂಶಿಸೋಣ.
ಹಳೆಯ ವಿಧಾನಹೊಸ ವಿಧಾನ
ಚರಾಕ್ಷರದೊಂದಿಗೆ3×x3x
ಚರಾಕ್ಷರವಿಲ್ಲದೆ3×535 or 3(5)

ಕ್ರಿಯೆಗಳ ಕ್ರಮಗಳು ಮುಖ್ಯವಾದಾಗ ಬೀಜೋಕ್ತಿಯ ಬೆಲೆಯನ್ನು ಕಂಡುಹಿಡಿಯುವುದು.

ಹೆಚ್ಚು ಸಂಕೀರ್ಣವಾದ ಬೀಜೋಕ್ತಿಗಳಿಗಾಗಿ, ಕ್ರಿಯೆಗಳ ಕ್ರಮಕ್ಕೆ ನಾವು ಹೆಚ್ಚು ಗಮನವನ್ನು ಕೊಡಬೇಕಾಗಿದೆ. ನಾವು ಒಂದು ಉದಾಹರಣೆಯನ್ನು ಗಮನಿಸೋಣ:
e=4 ಆದಾಗ ಬೀಜೋಕ್ತಿ 5+3eನ ಬೆಲೆಯೇನು?.
5+3e=5+34        ಬದಲಾಯಿಸಿ e ಅನ್ನು 4 ರಿಂದ.=5+12        ಮೊದಲು ಗುಣಿಸಿ (ಕ್ರಿಯೆಗಳ ಕ್ರಮದಿಂದ)=17
ಆದುದರಿಂದ, e=4 ಆದಾಗ ಬೀಜೋಕ್ತಿ 5+3e ಯು 17 ಕ್ಕೆ ಸಮ.
ಮೌಲ್ಯಮಾಪನ ಮಾಡುವಾಗ ಕ್ರಿಯೆಗಳ ಕ್ರಮದ ಬಗ್ಗೆ ಯೋಚಿಸಲು ನಾವು ಎಚ್ಚರಿಕೆಯಿಂದ ಇರಬೇಕಾದದ್ದು ಹೇಗೆ ಎಂಬುದನ್ನು ಗಮನಿಸಿ. ಒಂದು ಸಾಮಾನ್ಯ ತಪ್ಪು ಉತ್ತರ 32, ನಾವು ಮೊದಲು 5 ಮತ್ತು 3 ಕೂಡಿದಾಗ 8 ಬರುತ್ತದೆ, ನಂತರ 8 ನ್ನು 4 ರಿಂದ ಗುಣಿಸಿದಾಗ 32 ಬರುತ್ತದೆ.

ಅಭ್ಯಾಸಿಸೋಣ!

ಸಮಸ್ಯೆ 1
z=4 ಆದಾಗ ಬೀಜೋಕ್ತಿ 9zನ ಬೆಲೆಯೇನು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಕಠಿಣ ಸಮಸ್ಯೆಗಳು

ಕಠಿಣ ಸಮಸ್ಯೆ 1
e=5 ಆದಾಗ ee5e ನ ಬೆಲೆಯನ್ನು ಕಂಡುಹಿಡಿಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ