If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಘಾತಾಂಕಗಳ ಪರಿಚಯ

ಘಾತಾಂಕಗಳು ಮತ್ತು ಆಧಾರಸಂಖ್ಯೆಗಳನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಕಲಿಯಿರಿ. ಉದಾಹರಣೆಗೆ, 4 x 4 x 4 x 4 x 4 ಇದನ್ನು ಘಾತಾಂಕದಲ್ಲಿ ಬರೆಯುವುದು.
ಘಾತಸೂಚಿ ಮತ್ತು ಆಧಾರ ಸಂಖ್ಯೆಗಳು ಹೀಗೆ ಕಾಣುತ್ತವೆ:
43
ಒಂದು ಸಂಖ್ಯೆಯ ಮೇಲಿನ ಬಲ ಭಾಗದಲ್ಲಿ ಚಿಕ್ಕದಾಗಿ ಬರೆಯಲ್ಪಟ್ಟ ಸಂಖ್ಯೆಯನ್ನು ಘಾತಸೂಚಿ ಎನ್ನುತ್ತೇವೆ.ಘಾತಸೂಚಿಯ ಕೆಳಗಿನ ಸಂಖ್ಯೆಯನ್ನು ಆಧಾರ ಸಂಖ್ಯೆ ಎನ್ನುತ್ತೇವೆ. ಈ ಉದಾಹರಣೆಯಲ್ಲಿ, ಆಧಾರ ಸಂಖ್ಯೆ 4 ಮತ್ತು ಘಾತಸೂಚಿ 3.
ಆಧಾರ ಸಂಖ್ಯೆ 7, ಮತ್ತು ಘಾತಸೂಚಿ 5 ಆಗಿರುವುದಕ್ಕೆ ಇಲ್ಲಿ ಒಂದು ಉದಾಹರಣೆ ಇದೆ:
75
ಘಾತಸೂಚಿಯು ಆಧಾರ ಸಂಖ್ಯೆಯನ್ನು ಎಷ್ಟು ಬಾರಿ ಅದರಿಂದಲೇ ಗುಣಿಸಬೇಕು ಎಂಬುದನ್ನು ನಮಗೆ ತಿಳಿಸುತ್ತದೆ. ನಮ್ಮ ಉದಾಹರಣೆಯಲ್ಲಿ, 43ಇದು ಆಧಾರ ಸಂಖ್ಯೆ 4 ನ್ನುಅದರಿಂದಲೇ 3 ಬಾರಿ ಗುಣಿಸಬೇಕು ಎಂಬುದನ್ನು ತಿಳಿಸುತ್ತದೆ:
43=4×4×4
ಗುಣಾಕಾರದ ಲೆಕ್ಕಗಳನ್ನು ಒಂದು ಸಲ ಬರೆದುಕೊಂಡಾಗಲೇ, ಸುಲಭವಾಗಿ ಅ ಉಕ್ತಿಯ ಬೆಲೆಯನ್ನು ಕಂಡುಹಿಡಿಯಬಹುದು.ಇದನ್ನು ಈಗ ಈ ಉದಾಹರಣೆಯಲ್ಲೇ ಮಾಡೋಣ:
43=4×4×4
43=16×4
43=64
ಘಾತಾಂಕಗಳನ್ನು ಉಪಯೋಗಿಸಲು ಪ್ರಮುಖ ಕಾರಣವೇನೆಂದರೆ ಇದು ಅತೀ ದೊಡ್ಡ ಸಂಖ್ಯೆಗಳನ್ನು ಚಿಕ್ಕದಾಗಿ ಬರೆಯುವ ವಿಧಾನವಾಗಿದೆ.ಉದಾಹರಣೆಗೆ, ಕೆಳಗೆ ಇರುವುದನ್ನು ನಾವು ವ್ಯಕ್ತಪಡಿಸಬೇಕೆಂದು ಭಾವಿಸೋಣ :
2×2×2×2×2×2
ನಿಜವಾಗಲೂ ಅದನ್ನು ತುಂಬಾ ದೀರ್ಘವಾಗಿ ಬರೆಯಬೇಕಾಗಿದೆ. ಇದನ್ನು ಟೈಪ್ ಮಾಡುತ್ತಿರುವುದರಿಂದಲೇ ನನ್ನ ಕೈಗಳಿಗೆ ನೋವಾಗಿವೆ! Iಇದರ ಬದಲು 2 ಎಂಬುದು ಅದರಿಂದಲೇ 6 ಬಾರಿ ಗುಣಿಸಲ್ಪಟ್ಟಿದೆ ಎಂಬುದನ್ನು ನೋಡಬಹುದು. ಇದರ ಅರ್ಥ ಏನೆಂದರೆ,ಇದನ್ನೇ 2 ನ್ನು ಆಧಾರ ಸಂಖ್ಯೆಯಾಗಿ ಮತ್ತು 6 ನ್ನು ಘಾತಸೂಚಿಯಾಗಿಯೂ ಬರೆಯಬಹುದು:
2×2×2×2×2×2=26
ಸಮಾಧಾನ. ಘಾತಾಂಕಗಳು ನಮಗೆ ಅರ್ಥವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕೆಲವು ಅಭ್ಯಾಸದ ಲೆಕ್ಕಗಳನ್ನು ಬಿಡಿಸಲು ಪ್ರಯತ್ನಿಸೋಣ.

ಅಭ್ಯಾಸದ ಲೆಕ್ಕಗಳು:

ಲೆಕ್ಕ 1A
7×7×7 ಇದನ್ನು ಘಾತಾಂಕಗಳನ್ನು ಉಪಯೋಗಿಸಿ ಬರೆಯಿರಿ.

ಸವಾಲಿನ ಲೆಕ್ಕಗಳು:

ಸಮಸ್ಯೆ 2A
>,<, or = ಇವುಗಳೊಂದಿಗೆ ಅಸಮವಾಗಿರುವುದನ್ನು ಪೂರ್ಣಗೊಳಿಸಿ.
25
52