If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವರ್ಗಮೂಲಗಳ ವಿಮರ್ಶೆ

ವರ್ಗಮೂಲಗಳನ್ನು ವಿಮರ್ಶಿಸಿ, ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿ .

ವರ್ಗಮೂಲಗಳು

ಒಂದು ಸಂಖ್ಯೆಯ ಅಪವರ್ತನವನ್ನು ಎರಡು ಬಾರಿ ಗುಣಿಸಿದಾಗ ದತ್ತ ಸಂಖ್ಯೆಯು ಬಂದರೆ ಆ ಅಪವರ್ತನವನ್ನು ದತ್ತ ಸಂಖ್ಯೆಯ ವರ್ಗಮೂಲ ಎನ್ನುವರು.
ವರ್ಗ ಮೂಲದ ಚಿಹ್ನೆ 1 .
ಒಂದು ಸಂಖ್ಯೆಯ ವರ್ಗಮೂಲವನ್ನು ಕಂಡುಹಿಡಿಯುವುದು ಒಂದು ಸಂಖ್ಯೆಯ ವರ್ಗವನ್ನು ಕಂಡುಹಿಡಿಯುವುದರ ವಿರುದ್ಧಕ್ರಿಯೆಯಾಗಿದೆ.
ಉದಾಹರಣೆ:
4×4 ಅಥವಾ 42 =16
ಆದ್ದರಿಂದ 16=4
ಒಂದು ಸಂಖ್ಯೆಯ ವರ್ಗಮೂಲವು ಪೂರ್ಣಸಂಖ್ಯೆಯಾದರೆ ಆ ಸಂಖ್ಯೆಯನ್ನು ಪೂರ್ಣವರ್ಗ ಎನ್ನುವರು. ಉದಾಹರಣೆ; 16 ಇದು ಒಂದು ಪೂರ್ಣ ವರ್ಗ ಏಕೆಂದರೆ ಇದರ ವರ್ಗಮೂಲವು ಪೂರ್ಣಸಂಖ್ಯೆಯಾಗಿದೆ.
ವರ್ಗಮೂಲ ಕಂಡುಹಿಡಿಯುವ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆ? ಈ ವೀಡಿಯೋ ನೋಡಿ.

ವರ್ಗಮೂಲಗಳನ್ನು ಕಂಡುಹಿಡಿಯುವುದು

ಯಾವ ಅಪವರ್ತನವನ್ನು ಎರಡು ಬಾರಿ ಗುಣಿಸಿದಾಗ ದತ್ತ ಸಂಖ್ಯೆ ಬರುತ್ತದೆ ಎಂದು ತಿಳಿಯದಿದ್ದರೆ, ನಾವು ಅಪವರ್ತನ ವೃಕ್ಷವನ್ನು ರಚಿಸಿ ನೋಡಬಹುದು.
ಉದಾಹರಣೆ:
36=?
ಇದು 36 ರ ಅಪವರ್ತನಗಳ ವೃಕ್ಷ:
27 ರ ಅವಿಭಾಜ್ಯ ಅಪವರ್ತನವು 2×2×3×3 ಆಗಿದೆ.
36 ರ ಬೆಲೆ ಕಂಡುಹಿಡಿಯಬೇಕಾಗಿದೆ ಆದ್ದರಿಂದ ಅವಿಭಾಜ್ಯ ಅಪವರ್ತನಗಳನ್ನು ಎರಡು ಸಮಾನ ಗುಂಪುಗಳಾಗಿ ಬರೆಯಿರಿ.
ಗಮನಿಸಿ, ನಾವು ಅಪವರ್ತನಗಳನ್ನು ಈ ರೀತಿಯಾಗಿಯೂ ಮರುಜೋಡಿಸಬಹುದು:
36=2×2×3×3=(2×3)×(2×3)
ಆದ್ದರಿಂದ, (2×3)2=62=36.
ಆದ್ದರಿಂದ, 36 ರ ಬೆಲೆ 6.

ಅಭ್ಯಾಸ ಮಾಡಿ

ಸಮಸ್ಯೆ 1
64=?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

*ಇನ್ನೂ ಹೆಚ್ಚಿನ ಸಮಸ್ಯೆಗಳಿಗಾಗಿ ಈ ಅಭ್ಯಾಸವನ್ನು ಪ್ರಯತ್ನಿಸಿ: * ವರ್ಗಮೂಲಗಳನ್ನು ಕಂಡುಹಿಡಿಯಲು
ಅಥವಾ ಈ ಅಭ್ಯಾಸವನ್ನು ಸವಾಲಾಗಿ ಸ್ವೀಕರಿಸಿ: ವರ್ಗ ಮತ್ತು ಘನಮೂಲಗಳನ್ನೊಳಗೊಂಡ ಸಮೀಕರಣಗಳು