If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಂಖ್ಯೆಗಳ ವರ್ಗೀಕರಿಸುವಿಕೆಯ ಅವಲೋಕನ

ಪೂರ್ಣ ಸಂಖ್ಯೆ , ಪೂರ್ಣಾಂಕ, ಭಾಗಲಬ್ಧ ಮತ್ತು ಅಭಾಗಲಬ್ಧ ಸಂಖ್ಯೆಗಳ ಅವಲೋಕಿಸಿ. ನಂತರ ಗುರ್ತಿಸುವುದನ್ನು ಅಭ್ಯಾಸ ಮಾಡಿ.

ಪೂರ್ಣಸಂಖ್ಯೆಗಳು

ಪೂರ್ಣಸಂಖ್ಯೆಗಳು ಭಿನ್ನರಾಶಿ ಅಥವಾ ದಶಮಾಂಶ ರೂಪದಲ್ಲಿ ವ್ಯಕ್ತಪಡಿಸಲು ಅಗತ್ಯವಿಲ್ಲದ ಸಂಖ್ಯೆಗಳಾಗಿವೆ.ಜೊತೆಗೆ ಪೂರ್ಣಸಂಖ್ಯೆಗಳು ಋಣಸಂಖ್ಯೆಗಳಾಗಿರಲು ಸಾಧ್ಯವಿಲ್ಲ. ಅಂದರೆ,ಪೂರ್ಣಸಂಖ್ಯೆಗಳು ಎಣಿಕೆಯ ಸಂಖ್ಯೆಗಳು ಮತ್ತು ಸೊನ್ನೆಯನ್ನು ಒಳಗೊಂಡಿದೆ.
ಪೂರ್ಣಸಂಖ್ಯೆಗಳಿಗೆ ಉದಾಹರಣೆಗಳು:
4,952,0,73

ಪೂರ್ಣಾಂಕಗಳು

ಪೂರ್ಣಾಂಕಗಳು ಪೂರ್ಣಸಂಖ್ಯೆಗಳು ಮತ್ತು ಅವುಗಳ ವಿರುದ್ಧ ಚಿಹ್ನೆಯುಳ್ಳ ಸಂಖ್ಯೆಗಳಾಗಿವೆ. ಆದ್ದರಿಂದ ,ಪೂರ್ಣಾಂಕಗಳು ಋಣ ಸಂಖ್ಯೆಗಳಾಗಿಯೂ ಇರಬಹುದು.
ಪೂರ್ಣಾಂಕಗಳಿಗೆ ಉದಾಹರಣೆಗಳು:
12,0,9,810

ಭಾಗಲಬ್ದ ಸಂಖ್ಯೆಗಳು

ಭಾಗಲಬ್ದ ಸಂಖ್ಯೆಗಳು ಎರಡು ಪೂರ್ಣಾಂಕಗಳ ಭಿನ್ನರಾಶಿಯಾಗಿ ವ್ಯಕ್ತಪಡಿಸಬಹುದಾದ ಸಂಖ್ಯೆಗಳಾಗಿವೆ.
ಭಾಗಲಬ್ದ ಸಂಖ್ಯೆಗಳಿಗೆ ಉದಾಹರಣೆಗಳು:
44,0.12,185,36

ಅಭಾಗಲಬ್ದ ಸಂಖ್ಯೆಗಳು

ಅಭಾಗಲಬ್ದ ಸಂಖ್ಯೆಗಳು ಯಾವುದೇ ಎರಡು ಪೂರ್ಣಾಂಕಗಳ ಭಿನ್ನರಾಶಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲವೊ ಅಂತಹ ಸಂಖ್ಯೆಗಳು.
ಅಭಾಗಲಬ್ದ ಸಂಖ್ಯೆಗಳಿಗೆ ಉದಾಹರಣೆಗಳು:
4π,3

ಸಂಖ್ಯೆಗಳ ವಿಧಗಳು ಹೇಗೆ ಸಂಬಂಧಿಸಿವೆ?

ಕಳಗಿನ ರೇಖಾಚಿತ್ರವು ಎಲ್ಲಾ ಪೂರ್ಣಸಂಖ್ಯೆಗಳು ಪೂರ್ಣಾಂಕಗಳು ,ಮತ್ತು ಎಲ್ಲಾ ಪೂರ್ಣಾಂಕಗಳು ಭಾಗಲಬ್ದ ಸಂಖ್ಯೆಗಳು ಎಂದುತಿಳಿಸುತ್ತದೆ.ಭಾಗಲಬ್ದ ಸಂಖ್ಯೆಗಳಲ್ಲದ ಸಂಖ್ಯೆಗಳನ್ನು ಅಭಾಗಲಬ್ದ ಸಂಖ್ಯೆಗಳು ಎನ್ನುವರು.
ಸಂಖ್ಯೆಗಳ ವರ್ಗೀಕರಣದ ಬಗ್ಗೆ ಹೆಚ್ಚು ತಿಳಿಯಬೇಕೆ ? ಪರಿಶೀಲಿಸಿ ಈ ವಿಡಿಯೊ.

ಅಭ್ಯಾಸ ಮಾಡಿ

ಸಮಸ್ಯೆ 1
5 ಎಂಬುದು ಎಂತಹ ಸಂಖ್ಯೆ?
ಅನ್ವಯವಾಗುವ ಎಲ್ಲಾ ಉತ್ತರಗಳನ್ನು ಆರಿಸಿ:

ಇಂತಹ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಲು ಬಯಸುವಿರಾ? ಕೆಳಗಿನ ಆಭ್ಯಾಸಗಳನ್ನು ಪ್ರಯತ್ನಿಸಿ:
ಸಂಖ್ಯೆಗಳನ್ನು ವರ್ಗೀಕರಿಸಿ:ಭಾಗಲಬ್ದ ಮತ್ತು ಅಭಾಗಲಬ್ದ
ಸಂಖ್ಯೆಗಳನ್ನು ವರ್ಗೀಕರಿಸುವುದು