If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ದರದ ಪುನರಾವಲೋಕನ

ದರದ ಮೂಲಭೂತ ಅಂಶಗಳ ಸಹಾಯದಿಂದ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿ.

ದರ ಎಂದರೇನು?

ಅಳತೆಯ ವಿವಿಧ ಘಟಕಗಳೊಂದಿಗೆ ಎರಡು ಪರಿಮಾಣಗಳನ್ನು ಹೋಲಿಸುವ ಅನುಪಾತವನ್ನು ದರ .
ದರಕ್ಕೆ ಒಂದು ಉದಾಹರಣೆ:
ಒಂದು ವಿಮಾನವು 765 ಮೈಲಿಯನ್ನು ಹಾರಿಹೋಗಲು 5 ಗಂಟೆಯನ್ನು ತೆಗೆದುಕೊಂಡಿತು.

ಏಕಾಂಶ ದರಗಳು

ಎರಡು ಅಳತೆಗಳನ್ನು ಹೋಲಿಕೆ ಮಾಡುವಾಗ ಅವುಗಳಲ್ಲಿ ಒಂದು ಪದವು 1 (ಸಾಮಾನ್ಯವಾಗಿ ಎರಡನೇ ಪದ) ಅದನ್ನು ಏಕಾಂಶ ದರ ಎನ್ನುತ್ತೇವೆ.
ಏಕಾಂಶ ದರಗಳಿಗೆ ಉದಾಹರಣೆ:
1 ಗಂಟೆಯಲ್ಲಿ 60 ನಿಮಿಷಗಳಿವೆ .
1 ನಿಮಿಷದಲ್ಲಿ ರಾಜು 42 ಪದಗಳನ್ನು ಟೈಪ್ ಮಾಡುತ್ತಾನೆ.
ದರಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆ? ನೋಡಿ [ಈ ವೀಡಿಯೊ](/v/ದರಗಳ ಪರಿಚಯ).

ಏಕಾಂಶ ದರಗಳನ್ನು ಕಂಡುಹಿಡಿಯುವುದು

ಏಕಾಂಶ ದರ ಕಂಡುಹಿಡಿಯಲು, ನಾವು ದರದಲ್ಲಿ ಮೊದಲ ಪರಿಮಾಣವನ್ನು ಎರಡನೇ ಪರಿಮಾಣದಿಂದ ಭಾಗಿಸಬೇಕು.
ಉದಾಹರಣೆ:
ಒಂದು ವಿಮಾನವು 765 ಮೈಲಿಯನ್ನು ಹಾರಿಹೋಗಲು 5 ಗಂಟೆಯನ್ನು ತೆಗೆದುಕೊಂಡಿತು.
765÷5=153
ವಿಮಾನ ಹಾರಿದ ದರವು ಪ್ರತಿ ಗಂಟೆಗೆ 153 ಮೈಲು . ನಾವು ಏಕಾಂಶ ದರವನ್ನು ಈ ರೀತಿ ಸಹ ಬರೆಯಬಹುದು:- 153 ಮೈಲು:1 ಗಂಟೆ.
ಏಕಾಂಶ ದರಗಳ ಪರಿಹಾರದ ಬಗ್ಗೆ ಮತ್ತಷ್ಟು ತಿಳಿಯಬೇಕೆ? ನೋಡಿ [ಈ ವೀಡಿಯೊ](/v/ಏಕಾಂಶ ದರವನ್ನು ಕಂಡು ಹಿಡಿಯುವುದು).

ದರ ಸಮಸ್ಯೆಗಳನ್ನು ಪರಿಹರಿಸಲು ಏಕಾಂಶ ದರಗಳನ್ನು ಬಳಸುವುದು

ಒಂದು ಉದಾಹರಣೆಯನ್ನು ನೋಡೋಣ.
ಮನು 7 ದಿನಗಳಲ್ಲಿ 42 ಹುಟ್ಟುಹಬ್ಬದ ಕೇಕ್ ಗಳನ್ನು ತಯಾರಿಸುತ್ತಾನೆ. .
ಮನು 5 ದಿನಗಳಲ್ಲಿ ಎಷ್ಟು ಹುಟ್ಟುಹಬ್ಬದ ಕೇಕ್ ಗಳನ್ನು ತಯಾರಿಸುತ್ತಾನೆ?
ಮೊದಲು, ನಾವು ಏಕಾಂಶ ದರವನ್ನು ಕಂಡುಹಿಡಿಯೋಣ.
ಮನು ಏಕಾಂಶ ದರದಲ್ಲಿ ಪ್ರತಿ 1 ದಿನಕ್ಕೆ 6 ಕೇಕ್ ಗಳನ್ನು ತಯಾರಿಸುತ್ತಾನೆ.
ಈಗ ನಾವು ಏಕಾಂಶ ದರವನ್ನು ಉಪಯೋಗಿಸಿಕೊಂಡು ಮನು 5 ದಿನಗಳಲ್ಲಿ ತಯಾರಿಸಿದ ಕೇಕ್ ಗಳನ್ನುಕಂಡುಹಿಡಿಯೋಣ.
5 ದಿನಗಳಲ್ಲಿ, ಮನು 30 ಕೇಕ್ ಗಳನ್ನು ತಯಾರಿಸುತ್ತಾನೆ.

ಅಭ್ಯಾಸ ಮಾಡಿ

ಸಮಸ್ಯೆ 1
ಫ್ರಾನ್ಸಿಸ್ ನು 7 ದಿನಗಳಲ್ಲಿ 91 ಆಯಿಲ್ ಬದಲಾವಣೆ ಪೂರ್ಣಗೊಳಿಸುತ್ತಾನೆ.
ಫ್ರಾನ್ಸಿಸ್ ನು 11 ದಿನಗಳಲ್ಲಿ ಎಷ್ಟು ಆಯಿಲ್ ಬದಲಾವಣೆ ಪೂರ್ಣಗೊಳಿಸುತ್ತಾನೆ?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಆಯಿಲ್ ಬದಲಾವಣೆ

ಇನ್ನೂ ಹೆಚ್ಚು ಲೆಕ್ಕಗಳನ್ನು ಅಭ್ಯಾಸಿಸಬೇಕೆ? ನೋಡಿ [ಈ ಅಭ್ಯಾಸ](/e/ದರ_ಲೆಕ್ಕಗಳು 0.5).