If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಅವಿಭಾಜ್ಯ ಮತ್ತು ಭಾಜ್ಯ ಸಂಖ್ಯೆಗಳ ಪುನರಾವಲೋಕನ.

ಅವಿಭಾಜ್ಯ ಮತ್ತು ಭಾಜ್ಯ ಸಂಖ್ಯೆಗಳ ಪುನರಾವಲೋಕನ ಮತ್ತು ಕೆಲವು ಸಮಸ್ಯೆಗಳನ್ನು ಅಭ್ಯಾಸ ಮಾಡುವುದು.

ಅವಿಭಾಜ್ಯ ಸಂಖ್ಯೆ ಎಂದರೇನು?.

2 ಅಪವರ್ತನಗಳನ್ನು ಮಾತ್ರ ಹೊಂದಿರುವ ಸಂಖ್ಯೆಯೇ ಅವಿಭಾಜ್ಯ ಸಂಖ್ಯೆ .
ಅವಿಭಾಜ್ಯ ಸಂಖ್ಯೆಗಳು 1 ಮತ್ತು ಅದೇ ಸಂಖ್ಯೆಯನ್ನು ಮಾತ್ರ ಅಪವರ್ತನಗಳಾಗಿ ಹೊಂದಿರುತ್ತವೆ.
ಸಂಖ್ಯೆ 7 ಅವಿಭಾಜ್ಯ ಸಂಖ್ಯೆಗೆ ಉದಾಹರಣೆ ಆಗಿದೆ. ಇದರ ಅಪವರ್ತನಗಳು 1 ಮತ್ತು 7 ಮಾತ್ರ. ಬೇರೆ ಯಾವುದೇ ಪೂರ್ಣ ಸಂಖ್ಯೆಯಿಂದ ಇದು ನಿಶ್ಯೇಷವಾಗಿ ಭಾಗವಾಗುವುದಿಲ್ಲ.
ಅವಿಭಾಜ್ಯ ಸಂಖ್ಯೆಗಳ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವಿರಾ? ನೋಡಿ ಈ ವೀಡಿಯೋವನ್ನು.

ಅಭ್ಯಾಸ ಪಟ್ಟಿ 1: ಅವಿಭಾಜ್ಯ ಸಂಖ್ಯೆಗಳನ್ನು ಗುರುತಿಸುವುದು

ಲೆಕ್ಕ 1A
ಇವುಗಳಲ್ಲಿ ಅವಿಭಾಜ್ಯ ಸಂಖ್ಯೆಗಳು ಯಾವುವು?
12, 42, 61, 87, 95
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ನೋಡಿ ಈ ಅಭ್ಯಾಸವನ್ನು.

ಭಾಜ್ಯ ಸಂಖ್ಯೆಗಳು ಎಂದರೇನು?

ಭಾಜ್ಯ ಸಂಖ್ಯೆಗಳು 2 ಕ್ಕಿಂತ ಹೆಚ್ಚು ಅಪವರ್ತನಗಳನ್ನು ಹೊಂದಿರುತ್ತವೆ. ಭಾಜ್ಯ ಸಂಖ್ಯೆಗಳು ಅಪವರ್ತನಗಳಾಗಿ 1 ಮತ್ತು ಅದೇ ಸಂಖ್ಯೆಗಳ ಜೊತೆ ಬೇರೆ ಅಪವರ್ತನಗಳನ್ನು ಹೊಂದಿರುತ್ತವೆ.
16 ಭಾಜ್ಯ ಸಂಖ್ಯೆಗೆ ಉದಾಹರಣೆ ಆಗಿದೆ. ಸಂಖ್ಯೆ 16 ರ ಅಪವರ್ತನಗಳು 1,2,4,8 ಮತ್ತು 16 ಗಳಾಗಿವೆ. ಎಲ್ಲಾ ಸಂಖ್ಯೆಗಳು 16 ನ್ನು ನಿಶ್ಯೇಷವಾಗಿ ಭಾಗಿಸುತ್ತವೆ.
ಅವಿಭಾಜ್ಯ ಮತ್ತು ಭಾಜ್ಯ ಸಂಖ್ಯೆಗಳನ್ನು ಗುರುತಿಸುವ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವಿರಾ? ನೋಡಿ ಈ ವೀಡಿಯೋ.
ಅವಿಭಾಜ್ಯ ಮತ್ತು ಭಾಜ್ಯ ಸಂಖ್ಯೆಗಳ ಬಗ್ಗೆ ಯೋಚಿಸಲು ಹೆಚ್ಚಿನ ಮಾರ್ಗಗಳನ್ನು ಬಯಸುತ್ತೀರಾ? ನೋಡಿ ಈ ಲೇಖನ.

ಅಭ್ಯಾಸ ಪಟ್ಟಿ 2: ಭಾಜ್ಯ ಸಂಖ್ಯೆಗಳನ್ನು ಗುರುತಿಸುವುದು

ಸಮಸ್ಯೆ 2A
ಇವುಗಳಲ್ಲಿ ಭಾಜ್ಯ ಸಂಖ್ಯೆಗಳು ಯಾವುವು?
29, 41, 47, 82, 89
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ಈ ಅಭ್ಯಾಸವನ್ನು ನೋಡಿ.