If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಕೋನಗಳ ರಚನೆಯನ್ನು ಪರಿಶೀಲಿಸಿ

ಕೋನಮಾಪಕದ ಸಹಾಯದಿಂದ ಕೋನಗಳನ್ನು ರಚಿಸುವುದನ್ನು ಪರಿಶೀಲಿಸಿ, ನಂತರ ಕೆಲವನ್ನು ಸ್ವತಃ ನೀವೇ ರಚಿಸಲು ಪ್ರಯತ್ನಿಸಿ.

ಕೋನಗಳನ್ನು ರಚಿಸುವುದು

ನಿರ್ದಿಷ್ಟ ಡಿಗ್ರಿಗಳ ಕೋನವನ್ನು ರಚಿಸಲು, ನಮಗೆ ಸಹಾಯಕ್ಕಾಗಿ ನಾವು ಪ್ರೊಟ್ರಾಕ್ಟರ್ ಅನ್ನು ಬಳಸಬಹುದು.
ಉದಾಹರಣೆ
65 ಕೋನವನ್ನು ರಚಿಸಿ.
65 ಕೋನವನ್ನು ರಚಿಸಲು, ನಾವು ಕೋನಮಾಪಕದ ಮಧ್ಯದ ಬಿಂದುವನ್ನು ಕೋನದ ಶೃಂಗಕ್ಕೆ (2 ಕಿರಣಗಳು ಸೇರುವ ಜಾಗ) ಸರಿಸುತ್ತೇವೆ .
ನಂತರ, ನಾವು ಕಿರಣಗಳ ಒಂದು ರೇಖೆಯನ್ನು ಕೋನಮಾಪಕದ 0 ರೇಖೆಯ ಜೊತೆ ವಿಲೀನಗೊಳ್ಳವ ರೀತಿ ಜೋಡಿಸಬೇಕು.
ನಂತರ ನಾವು ಮತ್ತೊಂದು ಕಿರಣವು ಕೋನಮಾಪಕದಲ್ಲಿ 65 ಉಂಟುಮಾಡುವ ತನಕ ಚಲಿಸಬೇಕು.
ಅಳತೆಯು 65 ಆದಾಗ ಕೋನವು ಈ ರೀತಿ ಕಾಣಿಸುತ್ತದೆ. ಗಮನಿಸಿ: ಕೋನವನ್ನು ಯಾವುದೇ ದಿಕ್ಕಿನಲ್ಲಿ ಸುತ್ತುವಂತೆ ಮಾಡಬಹುದು, ಆದರೆ ಎರಡು ಕಿರಣಗಳ ನಡುವಿನ ಕೋನವು ಈ ರೀತಿಯೇ ಇರಬೇಕು.
ಕೋನಗಳ ರಚನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ನೋಡಿ ಈ ವೀಡಿಯೋ.

ಅಭ್ಯಾಸ ಮಾಡಿ

ಸಮಸ್ಯೆ 1
40 ಕೋನವನ್ನು ರಚಿಸುವುದು.

ಇದೇ ರೀತಿಯ ಹೆಚ್ಚು ಲೆಕ್ಕಗಳನ್ನು ಪ್ರಯತ್ನಿಸುತ್ತೀರಾ? ನೋಡಿ [ಈ ಅಭ್ಯಾಸ](/e/ಕೋಗಳನ್ನು ರಚಿಸುವುದು).