If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ತ್ರಿಕೋನಗಳ ವಿಧಗಳ ಪುನರಾವಲೋಕನ

ಬಾಹುಗಳ ಆಧಾರದ ಮೇಲೆ ತ್ರಿಕೋನಗಳನ್ನು ವರ್ಗೀಕರಿಸುವುದನ್ನು ಪರಿಶೀಲಿಸಿ.  ತ್ರಿಕೋನಗಳ ವರ್ಗೀಕರಣವನ್ನು ಅಭ್ಯಾಸ ಮಾಡಿ.

ಕೋನಗಳ ಆಧಾರದ ಮೇಲೆ ತ್ರಿಭುಜಗಳನ್ನು ವರ್ಗೀಕರಿಸುವುದು

ಲಘುಕೋನ ತ್ರಿಭುಜಗಳು

ಒಂದು ಲಘುಕೋನ ತ್ರಿಭುಜದ 3 ಕೋನಗಳಲ್ಲಿ ಪ್ರತಿ ಕೋನದ ಅಳತೆಯು 90ಗಿಂತ ಕಡಿಮೆ ಇರುತ್ತದೆ . ಕೆಳಗಿನವುಗಳು ಲಘುಕೋನ ತ್ರಿಭುಜಕ್ಕೆ ಉದಾಹರಣೆಗಳಾಗಿವೆ.

ಲಂಬಕೋನ ತ್ರಿಭುಜಗಳು

ಒಂದು ಲಂಬಕೋನ ತ್ರಿಭುಜದಲ್ಲಿ 1 ಕೋನದ ಅಳತೆಯು 90 ಇದ್ದು ,ಉಳಿದ 2 ಲಘುಕೋನಗಳಾಗಿವೆ. ಕೆಳಗಿನವು ಲಂಬಕೋನತ್ರಿಭುಜಗಳಿಗೆ ಉದಾಹರಣೆಗಳಾಗಿವೆ.

ವಿಶಾಲಕೋನ ತ್ರಿಭುಜಗಳು

ಒಂದು ವಿಶಾಲಕೋನ ತ್ರಿಭುಜದಲ್ಲಿ ಒಂದು ಕೋನದ ಅಳತೆಯು  90ಗಿಂತ ಹೆಚ್ಚಾಗಿದ್ದು  ಮತ್ತು ಉಳಿದ 2 ಕೋನಗಳು ಲಘೂಕೋನಗಳಿರುತ್ತವೆ. ಕೇಳಗೆ ನೀಡಿರುವ ಉದಾಹರಣೆಗಳು ವಿಶಾಲಕೋನತ್ರಿಭುಜಕ್ಕೆ ಉದಾಹರಣೆಗಳಾಗಿವೆ.
ತ್ರಿಭುಜದ ವಿಂಗಡನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆ? ನೋಡಿ ಈ ವೀಡಿಯೋ.
ಲೆಕ್ಕ 1A
PQRನ್ನು ಅದರ ಕೋನಗಳ ಆಧಾರದ ಮೇಲೆ ವಿಂಗಡಿಸಿ.
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ಪರಿಶೀಲಿಸಿ ಈ ಅಭ್ಯಾಸವನ್ನು.

ತ್ರಿಭುಜಗಳನ್ನು ಅವುಗಳ ಬಾಹುಗಳ ಉದ್ದದ ಆಧಾರದ ಮೇಲೆ ವಿಂಗಡಿಸಿ

ಸಮಬಾಹು ತ್ರಿಭುಜಗಳು

ಒಂದು ಸಮಬಾಹು ತ್ರಿಭುಜವು ಮೂರು ಸಮಬಾಹುಗಳನ್ನು ಹೊಂದಿವೆ. ಕೆಳಗಿನವುಗಳು ಸಮಬಾಹು ತ್ರಿಭುಜಕ್ಕೆ ಉದಾಹರಣೆಯಾಗಿದೆ.

ಸಮದ್ವಿಬಾಹು ತ್ರಿಭುಜಗಳು

ಒಂದು ಸಮದ್ವಿಬಾಹು ತ್ರಿಭುಜವು ಕನಿಷ್ಟ ಎರಡು ಸಮ ಬಾಹುಗಳನ್ನು ಹೊಂದಿದೆ. ಕೆಳಗಿನವುಗಳು ಸಮದ್ವಿಬಾಹು ತ್ರಿಭುಜಗಳಿಗೆ ಉದಾಹರಣೆಯಾಗಿದೆ.

ಅಸಮಬಾಹು ತ್ರಿಭುಜಗಳು

ಒಂದು ಅಸಮಬಾಹು ತ್ರಿಭುಜದಲ್ಲಿ ಯಾವುದೇ ಭಾಗಗಳು ಸಮವಿಲ್ಲ. ಕೆಳಗಿನವುಗಳು ಅಸಮಬಾಹು ತ್ರಿಭುಜಗಳಿಗೆ ಉದಾಹರಣೆಗಳಾಗಿವೆ.
ಸಮಸ್ಯೆ 2A
PQR ಅನ್ನು ಬಾಹುಗಳ ಆಧಾರದ ಮೇಲೆ ವಿಂಗಡಿಸಿ.
ಅನ್ವಯವಾಗುವ ಎಲ್ಲಾ ಉತ್ತರಗಳನ್ನು ಆರಿಸಿ:

ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ? ಪರಿಶೀಲಿಸಿ ಈ ಅಭ್ಯಾಸವನ್ನು.