ಮುಖ್ಯ ವಿಷಯ
ತರಗತಿ 6 ಗಣಿತ (ಭಾರತ)
Course: ತರಗತಿ 6 ಗಣಿತ (ಭಾರತ) > Unit 11
Lesson 4: ಬೀಜೋಕ್ತಿಗಳನ್ನು ಬರೆಯುವ ವಿಧಾನವನ್ನು ಪರಿಚಯಿಸುವುದು.- ಚರಾಕ್ಷರಗಳನ್ನೊಳಗೊಂಡ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.
- ಚರಾಕ್ಷರಗಳನ್ನೊಳಗೊಂಡ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.
- ಚರಾಕ್ಷರಗಳನ್ನೊಳಗೊಂಡ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.
- ಚರಾಕ್ಷರಗಳೊಂದಿಗೆ ಬೀಜೋಕ್ತಿಗಳನ್ನು ಬರೆಯುವುದು.
- ಚರಾಕ್ಷರಗಳೊಂದಿಗೆ ಬೀಜೋಕ್ತಿಗಳನ್ನು ಬರೆಯುವುದು.
- ಚರಾಕ್ಷರಗಳೊಂದಿಗೆ ಬೀಜೋಕ್ತಿಗಳನ್ನು ಬರೆಯುವುದು.
- ಬೀಜೋಕ್ತಿಗಳನ್ನು ಚರಾಕ್ಷರ ಮತ್ತು ಆವರಣ ಬಳಸಿ ಬರೆಯುವುದು.
© 2023 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಚರಾಕ್ಷರಗಳನ್ನೊಳಗೊಂಡ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.
x ಗಿಂತ 3 ದೊಡ್ಡದು ನಂತಹ ಪದಗುಚ್ಛಗಳಗೆ ಬೀಜೋಕ್ತಿಗಳನ್ನು ಬರೆಯುವುದನ್ನು ಕಲಿಯುತ್ತಾರೆ.
ವಸ್ತುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿರುವಾಗ ಗಣಿತ ಏಕೆ ಬೇಕು?
ಬೀಜಗಣಿತದ ಬೀಜೋಕ್ತಿಗಳು ಉಪಯುಕ್ತವಾಗಿವೆ ಏಕೆಂದರೆ ಅವು ಚರಾಕ್ಷರಗಳು ತೆಗೆದುಕೊಳ್ಳಬಹುದಾದ ಎಲ್ಲಾ ಮೌಲ್ಯಗಳಿಗೆ ಬೀಜೋಕ್ತಿಯ ಮೌಲ್ಯವನ್ನು ಪ್ರತಿನಿಧಿಸುತ್ತವೆ.
ಕೆಲವೊಮ್ಮೆ ಗಣಿತದಲ್ಲಿ, ನಾವು ಪದಗುಚ್ಛದೊಂದಿಗೆ ಬೀಜೋಕ್ತಿಯನ್ನು ವಿವರಿಸುತ್ತೇವೆ. ಉದಾಹರಣೆಗೆ, ಪದಗುಚ್ಚ
"ಐದಕ್ಕಿಂತ ಎರಡು ಹೆಚ್ಚು"
ಅನ್ನು ಬೀಜೋಕ್ತಿಯಾಗಿ ಈ ರೀತಿ ಬರೆಯಬಹುದು
5, plus, 2.
ಅಂತೆಯೇ, ನಾವು ಚರಾಕ್ಷರ ಅನ್ನು ಒಳಗೊಂಡಿರುವ ಪದಗಳಲ್ಲಿ ಬೀಜೋಕ್ತಿಯನ್ನು ವಿವರಿಸುವಾಗ, ನಾವು ಒಂದು ಬೀಜಗಣಿತದ ಬೀಜೋಕ್ತಿಯನ್ನು ನಿರೂಪಿಸುತ್ತಿದ್ದೇವೆ, ಒಂದು ಚರಾಕ್ಷರ ಇರುವ ಬೀಜೋಕ್ತಿ.
ಉದಾಹರಣೆಗೆ,
"x ಗಿಂತ 3 ಹೆಚ್ಚಾಗಿದೆ"
ಅನ್ನು ಬೀಜೋಕ್ತಿಯಾಗಿ ಈ ರೀತಿ ಬರೆಯಬಹುದು
x, plus, 3.
ಆದರೆ ಯಾಕೆ? ಪದಗಳಲ್ಲಿ ನಾವು ವಿಷಯಗಳನ್ನು ವಿವರಿಸುವುದಾದರೆ ಗಣಿತವನ್ನು ಏಕೆ ಬಳಸಬೇಕು? ಅನೇಕ ಕಾರಣಗಳಲ್ಲಿ ಇದು ಒಂದಾಗಿದೆ. ಗಣಿತವು ಹೆಚ್ಚು ನಿಖರವಾದದ್ದು ಮತ್ತು ಪದಗಳಿಗಿಂತ ಕೆಲಸ ಮಾಡುವುದು ಸುಲಭವಾಗಿದೆ. ನಾವು ಬೀಜಗಣಿತಕ್ಕೆ ಆಳವಾಗಿ ಇಳಿಯುತ್ತಿದ್ದಂತೆ ನೀವು ಯೋಚಿಸಬೇಕಾದ ಪ್ರಶ್ನೆಯೇ ಇದು.
ಸಂಕಲನ, ವ್ಯವಕಲನ, ಗುಣಾಕಾರ, ಮತ್ತು ಭಾಗಾಕಾರದ ಬೇರೆ ಬೇರೆ ಪದಗಳು
ಪ್ರತಿ ಕ್ರಿಯೆಗೆ ಸಾಮಾನ್ಯ ಪದಗಳನ್ನು ಸಾರಾಂಶ ಮಾಡುವ ಟೇಬಲ್ ಇಲ್ಲಿದೆ:
ಕ್ರಿಯೆ | ಪದ | ಬೀಜೋಕ್ತಿಯ ಉದಾಹರಣೆ |
---|---|---|
ಸಂಕಲನ | ಕೂಡು, ಮೊತ್ತ, ಹೆಚ್ಚಾಗಿದೆ, ಕ್ಕಿಂತ ಜಾಸ್ತಿ ಇದೆ | x, plus, 3 |
ವ್ಯವಕಲನ | ಕಳೆಯುವುದು, ರಿಂದ ಕಳೆ, ವ್ಯತ್ಯಾಸ, ಚಿಕ್ಕದು, ಕ್ಕಿಂತ ಕಡಿಮೆ ಇದೆ | p, minus, 6 |
ಗುಣಾಕಾರ | ರಷ್ಟು, ಗುಣಲಬ್ದ | 8, k |
ಭಾಗಾಕಾರ | ಭಾಗಾಂಶ, ಭಾಗಲಬ್ಧ | a, divided by, 9 |
ಉದಾಹರಣೆಗೆ, ಗುಣಲಬ್ದ ಪದವು ನಮಗೆ ಗುಣಾಕಾರವನ್ನು ಬಳಸಲು ಹೇಳುತ್ತದೆ. ಆದುದರಿಂದ ಪದಗುಚ್ಚವು
"ಎಂಟು ಮತ್ತು k ರ ಗುಣಲಬ್ದ"
ಅನ್ನು ಹೀಗೆ ಬರೆಯಬಹುದು
8, k.
ಮೆದಳಿಗೆ ಕಸರತ್ತು ನೀಡುವಂತಹ ಒಂದು ಉದಾಹರಣೆಯನ್ನು ನೋಡೋಣ
"m ನಿಂದ ಏಳನ್ನು ಕಡಿಮೆ ಮಾಡಿದೆ". ಇದಕ್ಕೆ ಒಂದು ಬೀಜೋಕ್ತಿಯನ್ನು ಬರೆಯಿರಿ
ನೋಡಿ "ಕಡಿಮೆ ಮಾಡಿದೆ" ಎಂಬ ಪದಗುಚ್ಚವು ನಮಗೆ ಕಳೆಯಬೇಕು ಎಂದು ತಿಳಿಸುತ್ತದೆ.
ಆದುದರಿಂದ, ಬೀಜೋಕ್ತಿಯು m, minus, 7.
ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸೋಣ!
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.