If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಮೀಕರಣಗಳ ಪರಿಚಯ

ಸಮೀಕರಣ ಎಂದರೇನು ಮತ್ತು ಸಮೀಕರಣದ ಪರಿಹಾರ ಕಂಡುಹಿಡಿಯುವುದು ಎಂದರೇನು ಎಂಬುದನ್ನು ಕಲಿಯಿರಿ.

ಸಮೀಕರಣ ಎಂದರೇನು?

ಎರಡು ಬೀಜೋಕ್ತಿಗಳು ಸಮ ಎಂದು ಹೇಳುವ ಹೇಳಿಕೆಯನ್ನು ಸಮೀಕರಣ ಎನ್ನುತ್ತೇವೆ. ಉದಾಹರಣೆಗೆ, ಬೀಜೋಕ್ತಿ 5+3 ಯು ಬೀಜೋಕ್ತಿ 6+2 ಗೆ ಸಮ(ಏಕೆಂದರೆ ಎರಡೂ ಕೂಡ 8 ಕ್ಕೆ ಸಮ), ಈಗ ನಾವು ಕೆಳಗಿನ ಸಮೀಕರಣವನ್ನು ಬರೆಯಬಹುದು:
5+3=6+2
ಸಮೀಕರಣಕ್ಕೆ ಇನ್ನೂ ಎರಡು ಉದಾಹರಣೆಗಳು ಇಲ್ಲಿವೆ:
62=3+1
74=3
ಬೀಜೋಕ್ತಿ ಮತ್ತು ಸಮೀಕರಣದ ನಡುವಿನ ವ್ಯತ್ಯಾಸವನ್ನು ನಾವು ಸ್ಪಷ್ಟವಾಗಿ ತಿಳಿದಿರಬೇಕು.
ಇವುಗಳಲ್ಲಿ ಯಾವುದು ಸಮೀಕರಣವಾಗಿದೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ

ಸರಿ ಸಮೀಕರಣಗಳು

ನಾವು ಈವರೆಗೆ ನೋಡಿದ ಸಮೀಕರಣಗಳೆಲ್ಲವು ಸರಿ ಸಮೀಕರಣಗಳು ಏಕೆಂದರೆ ಎಡಭಾಗದ ಬೀಜೋಕ್ತಿಯು ಬಲಭಾಗದ ಬೀಜೋಕ್ತಿಗೆ ಸಮವಾಗಿದೆ. ಸರಿ ಸಮೀಕರಣವು ಏನೆಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳೋಣ.
ಕೆಳಗಿನವುಗಳಲ್ಲಿ ಯಾವುವು ಸರಿ ಸಮೀಕರಣಗಳು?
ಅನ್ವಯವಾಗುವ ಎಲ್ಲಾ ಉತ್ತರಗಳನ್ನು ಆರಿಸಿ:

ಬೀಜಗಣಿತ ಸಮೀಕರಣಗಳಿಗೆ ಪರಿಹಾರಗಳು

ನಾವು ಇದುವರೆಗೂ ನೋಡಿದ ಎಲ್ಲಾ ಸಮೀಕರಣಗಳು ಕೇವಲ ಸಂಖ್ಯೆಗಳನ್ನು ಮಾತ್ರ ಹೊಂದಿವೆ, ಆದರೆ ಹೆಚ್ಚಿನ ಸಮೀಕರಣಗಳು ಚರಾಕ್ಷರವನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಸಮೀಕರಣ x+2=6 ಯು ಒಂದು ಚರಾಕ್ಷರವನ್ನು ಒಳಗೊಂಡಿದೆ. ಈ ರೀತಿಯ ಚರಾಕ್ಷರವನ್ನು ಒಳಗೊಂಡಿರುವ ಸಮೀಕರಣವನ್ನು ನಾವು ಬೀಜಗಣಿತ ಸಮೀಕರಣ ಎನ್ನುತ್ತೇವೆ.
ಒಂದು ಬೀಜಗಣಿತ ಸಮೀಕರಣಕ್ಕೆ, ಚರಾಕ್ಷರದ ಯಾವ ಬೆಲೆಯು ಸರಿ ಸಮೀಕರಣವನ್ನು ಉಂಟು ಮಾಡುತ್ತದೆ ಎಂಬುದನ್ನು ಕಂಡು ಹಿಡಿಯುವುದು ನಮ್ಮ ಗುರಿಯಾಗಿರಬೇಕು .
ಸಮೀಕರಣ x+2=6 ಕ್ಕೆ, ಹೇಗೆ x=4ಯು ಸರಿ ಸಮೀಕರಣವನ್ನು ಮತ್ತು x=3ಯು ತಪ್ಪು ಸಮೀಕರಣವನ್ನು ಉಂಟುಮಾಡುತ್ತದೆ ಎಂಬುದನ್ನು ಗಮನಿಸಿ.
ಸರಿ ಸಮೀಕರಣತಪ್ಪು ಸಮೀಕರಣ
x+2=64+2=?66=6 x+2=63+2=?656
ನಾವು ಹೇಗೆ ಚಿಹ್ನೆ =? ಯನ್ನು ನಮಗೆ ಸರಿ ಸಮೀಕರಣ ಅಥವಾ ತಪ್ಪು ಸಮೀಕರಣದ ಬಗ್ಗೆ ಗೊಂದಲ ಇದ್ದಾಗ ಬಳಸುತ್ತೇವೆ ಎಂಬುದನ್ನು ಗಮನಿಸಿ.
ಸರಿ ಸಮೀಕರಣವನ್ನು ಉಂಟು ಮಾಡುವ ಚರಾಕ್ಷರದ ಬೆಲೆಯನ್ನು ಸಮೀಕರಣಕ್ಕೆ ಪರಿಹಾರ ಎಂದು ಕರೆಯುತ್ತೇವೆ. ಉದಾಹರಣೆಗೆ x=4 ಯು x+2=6 ನ ಪರಿಹಾರವಾಗಿದೆ ಏಕೆಂದರೆ ಅದು ಸರಿ ಸಮೀಕರಣವನ್ನು ಉಂಟುಮಾಡುತ್ತದೆ.

ಕೆಲವು ಸಮಸ್ಯೆಗಳನ್ನು ಪ್ರಯತ್ನಿಸೋಣ

ಸಮಸ್ಯೆ 1
ಸಮೀಕರಣಕ್ಕೆ ಪರಿಹಾರವನ್ನು ಆಯ್ಕೆ ಮಾಡೋಣ.
3+g=10
:ಒಂದು ಉತ್ತರವನ್ನು ಆಯ್ಕೆ ಮಾಡಿ